ಏಳುನೆಲೆಯ ಮಣಿಯ ಮಾಡದ ಮಾಣಿಕ್ಯದ ಮಂಟಪದಲ್ಲಿ
ಲೀಲೆಯಿಂದ ಶಿವ ಮೂರ್ತಿಗೊಂಡಿದ್ದನಯ್ಯ.
ಓಲಗಗೊಡುತ್ತಿದ್ದರಯ್ಯ ಸಕಲಗಣಂಗಳು.
ಸೋಹಂ ಸೋಹಂ ಎನ್ನುತ್ತ
ದಿವಾರಾತ್ರಿಗಳಿಲ್ಲದ ಪೂಜೆಯ ಮಾಡುತ್ತಿದ್ದರಯ್ಯ ಶಿವಗಣಂಗಳು.
ಪೂಜೆ ನಿರ್ಮಾಲ್ಯವಾಗದೆ, ಕೇಳಿಕೆ ನಿಶ್ಯೂನ್ಯವಾಗದ ಮುನ್ನ
ಆನಂದ ಬಿಂದು ತುಳುಕದೆ, ನಂದಿ ಮುಂದುಗೆಡದೆ
ಅಂದವಳಿಯದೆ ಕೂಡಬೇಕು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ.
Transliteration (Vachana in Roman Script) Ēḷuneleya maṇiya māḍada māṇikyada maṇṭapadalli
līleyinda śiva mūrtigoṇḍiddanayya.
Ōlagagoḍuttiddarayya sakalagaṇaṅgaḷu.
Sōhaṁ sōhaṁ ennutta
divārātrigaḷillada pūjeya māḍuttiddarayya śivagaṇaṅgaḷu.
Pūje nirmālyavāgade, kēḷike niśyūn'yavāgada munna
ānanda bindu tuḷukade, nandi mundugeḍade
andavaḷiyade kūḍabēku,
nijaguru svatantrasid'dhaliṅgēśvaranalli.
Read More