•  
  •  
  •  
  •  
Index   ವಚನ - 285    Search  
 
ಯೋಗತಾಣವನರಿದು ಯೋಗಿಸಿಹೆನೆಂಬ ಯೋಗಿಗಳಿಗೆ ಯೋಗದ ಕ್ರಮವ ಹೇಳಿಹೆವು ಕೇಳಿರಯ್ಯ. ಸುಷುಮ್ನೆಯ ನಾಲ್ದೆಸೆಯಲ್ಲಿ, ಆತ್ಮಕಲೆ ವಿದ್ಯಾಕಲೆ ನಾದಕಲೆ ಬಿಂದುಕಲೆಗಳನರಿಯಬೇಕು. ಆ ಕಲೆ ನಾಲ್ಕು ಸುತ್ತಿ, ಅಗ್ನಿಕಲೆಗಳ ಹತ್ತನರಿವುದು. ಪಿಂಗಳೆಯಲ್ಲಿ ಭಾನುಕಲೆಗಳ ಹನ್ನೆರಡನರಿವುದು. ಇಡೆಯಲ್ಲಿ ಚಂದ್ರಕಲೆಗಳು ಹದಿನಾರು ಕ್ಷಯ ವೃದ್ಧಿಯಾಗಿ ನಡೆವುದನರಿವುದು. ಈ ಮೂವತ್ತೆಂಟು ಕಲೆಗಳ ಕೂಡಿಹ ಚಂದ್ರಸೂರ್ಯಾಗ್ನಿಗಳ ಮಧ್ಯದಲ್ಲಿ ತತ್ವಮೂರು ಕೂಡೆ ಬೆಳಗುವ ಪರಜ್ಯೋತಿರ್ಲಿಂಗವನರಿದು ಯೋಗಿಸಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬಳಿಕ ಕೂಡುವುದು ಕಾಣಿರಣ್ಣಾ.
Transliteration (Vachana in Roman Script) Yōgatāṇavanaridu yōgisihenemba yōgigaḷige yōgada kramava hēḷihevu kēḷirayya. Suṣumneya nāldeseyalli, ātmakale vidyākale nādakale bindukalegaḷanariyabēku. Ā kale nālku sutti, agnikalegaḷa hattanarivudu. Piṅgaḷeyalli bhānukalegaḷa hanneraḍanarivudu. Iḍeyalli candrakalegaḷu hadināru kṣaya vr̥d'dhiyāgi naḍevudanarivudu. Ī mūvatteṇṭu kalegaḷa kūḍ'̔iha candrasūryāgnigaḷa madhyadalli tatvamūru kūḍe beḷaguva parajyōtirliṅgavanaridu yōgisi nijaguru svatantrasid'dhaliṅgēśvarana baḷika kūḍuvudu kāṇiraṇṇā. Read More