ಮೃತ್ ಕಾಷ್ಠ ಪಾಷಾಣಂಗಳಿಂದಲಾದವೆಲ್ಲ ಲಿಂಗವೇ?
ಲೋಹ ಬೆಳ್ಳಿ ತಾಮ್ರ ಸುವರ್ಣದಿಂದಲಾದವೆಲ್ಲ ಲಿಂಗವೇ?
ಅಲ್ಲಲ್ಲ.
ಅಲ್ಲಿ ಭಾವಿಸುವ ಮನದ ಕೊನೆಯ ಮೊನೆಯಮೇಲೆ ಬೆಳಗುವ
ನಿಜ ಬೋಧಾರೂಪು ಲಿಂಗವಲ್ಲದೆ, ಇವೆಲ್ಲ ಲಿಂಗವೇ?
ತಿಳಿದು ನೋಡಲು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು
ತಾನೇ ಲಿಂಗವು.
Transliteration Mr̥t kāṣṭha pāṣāṇaṅgaḷindalādavella liṅgavē?
Lōha beḷḷi tāmra suvarṇadindalādavella liṅgavē?
Allalla.
Alli bhāvisuva manada koneya moneyamēle beḷaguva
nija bōdhārūpu liṅgavallade, ivella liṅgavē?
Tiḷidu nōḍalu, nijaguru svatantrasid'dhaliṅgēśvaranu
tānē liṅgavu.