ಅಶನಕ್ಕಾಗಿ ವಸನಕ್ಕಾಗಿ ದೆಸೆ ದೆಸೆಯಲ್ಲಿರ್ದವರೆಲ್ಲ
ನೆರೆದ ಪರಿಯ ನೋಡಾ.
ಒಬ್ಬರ ನುಡಿ ಒಬ್ಬರಿಗೆ ಸೊಗಸದ ಕಾರಣ
ಮಥನಕರ್ಕಶದಲ್ಲಿರ್ಪ ಪರಿಯ ನೋಡಾ.
ಅಯ್ಯಾ ಜೀಯಾ ದೇವರು ಎಂಬರು
ಮತ್ತೊಂದು ಮಾತ ಸೈರಿಸದೆ.
ಎಲವೊ ಎಲವೊ ಎಂದು ಕುಲವೆತ್ತಿ ನುಡಿವರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನೀ ಮಾಡಿದ ಮಾಯದ ಬಿನ್ನಾಣದ
ಮರೆಯಲ್ಲಿದ್ದವರ ಕಂಡು ನಾ ಬೆರಗಾದೆನು.
Transliteration (Vachana in Roman Script) Aśanakkāgi vasanakkāgi dese deseyallirdavarella
nereda pariya nōḍā.
Obbara nuḍi obbarige sogasada kāraṇa
mathanakarkaśadallirpa pariya nōḍā.
Ayyā jīyā dēvaru embaru
mattondu māta sairisade.
Elavo elavo endu kulavetti nuḍivaru.
Nijaguru svatantrasid'dhaliṅgēśvarā,
nī māḍida māyada binnāṇada
mareyalliddavara kaṇḍu nā beragādenu.
Read More