•  
  •  
  •  
  •  
Index   ವಚನ - 366    Search  
 
ತಾನೇ ಲಿಂಗವೆಂದರಿದು, ಮತ್ತೆ ಬೇರೆ ಲಿಂಗವಿದೆಂದು ಕಲ್ಪಿಸಿ ರೂಹಿಸಿ ಭಾವಿಸಿ ನೋಡಲು ಅದು ಭಾವಸಂಕಲ್ಪವಲ್ಲದೆ ನಿಜವಲ್ಲ. ಶುಕ್ತಿಯಲ್ಲಿ ರಜತಭಾವ ತೋರಿತ್ತೆಂದಡೆ, ಅದು ಸಹಜವೆ? ಇದು ಭಾವಸಂಕಲ್ಪವೆಂದರಿದಾಗವೆ ಭಾವ ನಿಃಪನ್ನವಾಗಿ ಪರಿಪೂರ್ಣ ಬೋಧಪರಾನಂದರೂಪ ತಾನೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೆ ಲಿಂಗವಲ್ಲದೆ ಬೇರೆ ಲಿಂಗವಿಲ್ಲ.
Transliteration (Vachana in Roman Script) Tānē liṅgavendaridu, matte bēre liṅgavidendu kalpisi rūhisi bhāvisi nōḍalu adu bhāvasaṅkalpavallade nijavalla. Śuktiyalli rajatabhāva tōrittendaḍe, adu sahajave? Idu bhāvasaṅkalpavendaridāgave bhāva niḥpannavāgi paripūrṇa bōdhaparānandarūpa tāne. Nijaguru svatantrasid'dhaliṅgēśvarana śaraṇane liṅgavallade bēre liṅgavilla. Read More