ಖಂಡಿತಜ್ಞಾನವಳಿದು,
ಅಖಂಡಿತಜ್ಞಾನಸ್ವರೂಪವಾದುದೇ ತೃಪ್ತಿ.
ಅಂಥ ತೃಪ್ತಿಯ ಅಮೃತಸೇವೆನೆಯಿಂದ ತೃಪ್ತನಾದ ಪ್ರಸಾದಿ.
ಶರಣಂಗೆ ಅಂತರಂಗ ಬಹಿರಂಗವೆಂಬುಭಯಾಂಗವಿಲ್ಲದ
ಮಹಾನಂದರೂಪಪ್ರಸಾದಿ ದಶದಿಗ್ಭರಿತನಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ, ಬೆಳಗುತ್ತಿಹನು.
Transliteration (Vachana in Roman Script) Khaṇḍitajñānavaḷidu,
akhaṇḍitajñānasvarūpavādudē tr̥pti.
Antha tr̥ptiya amr̥tasēveneyinda tr̥ptanāda prasādi.
Śaraṇaṅge antaraṅga bahiraṅgavembubhayāṅgavillada
mahānandarūpaprasādi daśadigbharitanāgi,
nijaguru svatantrasid'dhaliṅgēśvarana kūḍi, beḷaguttihanu.
Read More