ಮನದಲ್ಲಿ ತೋರುವ ನಾನಾ ತೋರಿಕೆಯ ಚಿಂತೆಯಳಿದು
ನಿಶ್ಚಿಂತನಾದ ಶಿವಯೋಗಿ,
ಏನೊಂದನೂ ಮನದಲ್ಲಿ ಚಿಂತಿಸದೆ ಉದಾಸೀನಪರವಾಗಿ
ಶಿವಶಕ್ತ್ಯಾತ್ಮಕವಾದ ಈ ವಿಶ್ವವನು
ಜ್ಞಾನಸ್ಥಾನದಲ್ಲಿ ಲಯವನೈದಿಸಿ
ಆ ನಿರಾಲಂಬಜ್ಞಾನದಲ್ಲಿ ಮನೋಲಯವಾದ ಶರಣಂಗೆ
ಹೊರಗೊಳಗು ಊರ್ಧ್ವಾಧೋಮಧ್ಯವೆಂಬವೇನೂ ತೋರದೆ
ಎಲ್ಲವೂ ತನ್ನಾಕಾರವಾಗಿ
ನಿರಾಕಾರ ಸ್ವಸಂವೇದ್ಯ ಪರತತ್ವ ತಾನೆಯಾಗಿಹನು'
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
Transliteration (Vachana in Roman Script) Manadalli tōruva nānā tōrikeya cinteyaḷidu
niścintanāda śivayōgi,
ēnondanū manadalli cintisade udāsīnaparavāgi
śivaśaktyātmakavāda ī viśvavanu
jñānasthānadalli layavanaidisi
ā nirālambajñānadalli manōlayavāda śaraṇaṅge
horagoḷagu ūrdhvādhōmadhyavembavēnū tōrade
ellavū tannākāravāgi
nirākāra svasanvēdya paratatva tāneyāgihanu'
nijaguru svatantrasid'dhaliṅgēśvarana śaraṇanu.
Read More