ಭಾವಿಸುವ ಭಾವದ ವಿಕಾರವಳಿದು,
ನಿರ್ಭಾವ ನೆಲೆಗೊಂಡು
ಚಿದಾಕಾಶರೂಪನಾದ ಶರಣಂಗೆ ಭಾವವಿಲ್ಲ.
ಭಾವವಿಲ್ಲವಾಗಿ ಮನವಿಲ್ಲ.
ಮನವಿಲ್ಲವಾಗಿ ನೆನೆಯಲಿಲ್ಲ.
ನೆನೆಯಲಿಲ್ಲದನುಪಮ ಸುಖಸಾರಾಯ ಶರಣ
ಸರಿತ್ ಸಮುದ್ರವ ಕೂಡಿ ತೆರೆಯಡಗಿ ನಿಂದಂತೆ
ಭಾವವಳಿದು ನಿಂದುದೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಲಿಂಗೈಕ್ಯವು.
Transliteration (Vachana in Roman Script) Bhāvisuva bhāvada vikāravaḷidu,
nirbhāva nelegoṇḍu
cidākāśarūpanāda śaraṇaṅge bhāvavilla.
Bhāvavillavāgi manavilla.
Manavillavāgi neneyalilla.
Neneyalilladanupama sukhasārāya śaraṇa
sarit samudrava kūḍi tereyaḍagi nindante
bhāvavaḷidu nindudē,
nijaguru svatantrasid'dhaliṅgēśvaranalli liṅgaikyavu.
Read More