•  
  •  
  •  
  •  
Index   ವಚನ - 75    Search  
 
ಉರಗನ ಫಣಾಮಣಿಯ ಬೆಳಗಿನಲ್ಲಿ ನಿಂದ ಪ್ರಸಾದಿ ಕರಿಯ ಕೊಂದು ಹರಿಯ ಬೆಳಗಿನಲ್ಲಿ ನಿಂದ ಪ್ರಸಾದಿ. ಶಿರದ ಮೇಲೆ ನಿಂದ ಗಂಗೆಯ ಬೆಳಗಿನಲ್ಲಿ ನಿಂದ ಪ್ರಸಾದಿ. ಉರಮಧ್ಯದಲ್ಲಿಪ್ಪ ಪರಂಜ್ಯೋತಿಯ ಬೆಳಗಿನಲ್ಲಿ ನಿಂದ ಪ್ರಸಾದಿ. ಪೂರ್ವಪಶ್ಚಿಮ ಏಕವಾದ ಬೆಳಗಿನಲ್ಲಿ ನಿಂದ ಪ್ರಸಾದಿ. ಇಂತೀ ಘನವನೆಲ್ಲ ಒಳಕೊಂಡ ಮಹಾಬೆಳಗಿನಲ್ಲಿ ನಿಂದ ಪ್ರಸಾದಿ. ಅಯ್ಯಾ ಚೆನ್ನಮಲ್ಲೇಶ್ವರಾ, ಆ ಪ್ರಸಾದಿಯ ಪ್ರಸಾದವ ಕೊಂಡು ನಾ ಉರಿಯುಂಡ ಕರ್ಪುರದಂತಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Transliteration Uragana phaṇāmaṇiya beḷaginalli ninda prasādi kariya kondu hariya beḷaginalli ninda prasādi. Śirada mēle ninda gaṅgeya beḷaginalli ninda prasādi. Uramadhyadallippa paran̄jyōtiya beḷaginalli ninda prasādi. Pūrvapaścima ēkavāda beḷaginalli ninda prasādi. Intī ghanavanella oḷakoṇḍa mahābeḷaginalli ninda prasādi. Ayyā cennamallēśvarā, ā prasādiya prasādava koṇḍu nā uriyuṇḍa karpuradantādenayyā, basavapriya kūḍalacennabasavaṇṇā.