•  
  •  
  •  
  •  
Index   ವಚನ - 172    Search  
 
ಭಕ್ತಿಯ ಮಾಡಿಹೆನೆಂಬವರೆಲ್ಲ ಭಾಗ್ಯವಂತರಾದರು. ಮುಕ್ತಿಯ ಸಾಧಿಸಿಹೆನೆಂಬವರೆಲ್ಲ ಮೂವಿಧಿಗೊಳಗಾದರು. ತತ್ವವನರಿದಿಹೆನೆಂಬವರೆಲ್ಲ ತರ್ಕಿಗಳಾದರು. ವಿರಕ್ತಿಯ ಮಾಡಿಹೆನೆಂಬವರೆಲ್ಲ ಬೈರಾಗಿಗಳಾದರು. ಈ ಚತುರ್ವಿಧದೊಳಗೆ ಆವಂಗವೂ ಅಲ್ಲ. ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಲ್ಲಿ ಶರಣರ ಪರಿ ಬೇರೆ.
Transliteration Bhaktiya māḍ'̔ihenembavarella bhāgyavantarādaru. Muktiya sādhisihenembavarella mūvidhigoḷagādaru. Tatvavanaridihenembavarella tarkigaḷādaru. Viraktiya māḍ'̔ihenembavarella bairāgigaḷādaru.