ಮನವನರಿದಂಗೆ ಮತದ ಹಂಗೇಕೊ?
ನಿತ್ಯವನರಿದಂಗೆ ತೀರ್ಥದ ಹಂಗೇಕೊ?
ಪರಮಾರ್ಥವನರಿದಂಗೆ ಪ್ರಸಾದದ ಹಂಗೇಕೊ?
ಜ್ಯೋತಿಯನರಿದಂಗೆ ಕತ್ತಲೆಯ ಹಂಗೇಕೊ?
ಲೋಕವನರಿದಂಗೆ ವ್ಯಾಕುಲದ ಹಂಗೇಕೊ?
ಈ ತೆರನನರಿದಂಗೆ ಮುಂದಾವ ಭೀತಿಯುಂಟು ಹೇಳಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ?
Transliteration Manavanaridaṅge matada haṅgēko?
Nityavanaridaṅge tīrthada haṅgēko?
Paramārthavanaridaṅge prasādada haṅgēko?
Jyōtiyanaridaṅge kattaleya haṅgēko?
Lōkavanaridaṅge vyākulada haṅgēko?
Ī terananaridaṅge mundāva bhītiyuṇṭu hēḷā,
basavapriya kūḍalacennabasavaṇṇā?