ವಾದಿಗೆ ಜೂಜನಾಡುವಾತನೊಬ್ಬ ಪಾತಕ.
ಪರರ ಹಾದಿಯ ಹೋಗುವಾತನೊಬ್ಬ ಪಾತಕ.
ಪಶುವಧೆಯ ಮಾಡುವಾತನೊಬ್ಬ ಪಾತಕ.
ಇವರು ಮೂವರು ಹೋದ ಹಾದಿಯಲ್ಲಿ ಹೋಗಲಾಗದು.
ಅದೇನು ಕಾರಣವೆಂದರೆ,
ಅವರು ಚಂದ್ರ ಸೂರ್ಯರುಳ್ಳನ್ನಕ್ಕ
ನರಕದಲ್ಲಿಪ್ಪುದು ತಪ್ಪದು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
Transliteration Vādige jūjanāḍuvātanobba pātaka.
Parara hādiya hōguvātanobba pātaka.
Paśuvadheya māḍuvātanobba pātaka.
Ivaru mūvaru hōda hādiyalli hōgalāgadu.
Adēnu kāraṇavendare,
avaru candra sūryaruḷḷannakka
narakadallippudu tappadu kāṇā,
basavapriya kūḍalacennabasavaṇṇā.