ಈ ಪರಂಜ್ಯೋತಿ ಪ್ರಕಾಶವಾದ ಬೆಳಗ
ನೋಡಿ ನೋಟವ ಮರೆದೆ,
ಕೂಡಿ ಕೂಟವ ಮರೆದೆ.
ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ
ನಾನು ಓಲಾಡಿ ಸುಖಿಯಾದೆನಯ್ಯಾ,
ಚೆನ್ನಮಲ್ಲೇಶ್ವರನ ಕರುಣವಿಡಿದು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Ī paran̄jyōti prakāśavāda beḷaga
nōḍi nōṭava marede,
kūḍi kūṭava marede.
Tānu tānāgippa mahābeḷaginalli
nānu ōlāḍi sukhiyādenayyā,
cennamallēśvarana karuṇaviḍidu
appaṇṇapriya cennabasavaṇṇā.