ಮಣ್ಣು ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ,
ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ,
ವಸ್ತುವ ಮುಟ್ಟುವದಕ್ಕೆ ದೃಷ್ಟವಿಲ್ಲದೆ,
ಕಷ್ಟದ ಮರವೆಯಲ್ಲಿ, ದೃಷ್ಟದ
ಸರಾಪಾನವ ಕೊಂಡು ಮತ್ತರಾಗುತ್ತ,
ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ?
ಧರ್ಮೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
Transliteration Maṇṇu honnu heṇṇemba tribhaṅgiyalli bhaṅgitarāgi,
āseyemba madhupānadinda ukkalitavillade,
vastuva muṭṭuvadakke dr̥ṣṭavillade,
kaṣṭada maraveyalli, dr̥ṣṭada
sarāpānava koṇḍu mattarāgutta,
iṣṭada dr̥ṣṭada citta mattuṇṭe?
Dharmēśvaraliṅgava muṭṭade ittale uḷiyittu.