•  
  •  
  •  
  •  
Index   ವಚನ - 102    Search  
 
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಸೀಮೆಗಳೆನಿಸಿ ಯತಿ ಸಿದ್ಧ ಸಾಧ್ಯರೆಲ್ಲ ವ್ರತಭ್ರಷ್ಟರಾದರು. ಅದು ಎಂತೆಂದೊಡೆ: ಕಾಮವೆಂಬ ಅಗ್ನಿ, ಕ್ರೋಧವೆಂಬ ಕಾಷ್ಠ, ಲೋಭವೆಂಬ ಗಾಳಿ ಪುಟಮಾಡಿ, ಮೋಹವೆಂಬರಣ್ಯ, ಮದವೆಂಬ ಕುಳ್ಳು, ಮತ್ಸರವೆಂಬ ಗಿರಿಗೆ ಬೆಂಕಿ ಹತ್ತಿ, ಸುಟ್ಟು ಸುಟ್ಟು ಬೆಂದರು ಹಲಬರು, ನೊಂದರು ಹಲಬರು. ಕಾಮವ ಕಳೆದು ನಿಃಕಾಮಿಯಾಗಿ, ಕ್ರೋಧವ ಕಳೆದು ನಿಃಕ್ರೋಧಿಯಾಗಿ, ಲೋಭವ ಕಳೆದು ನಿರ್ಲೋಭಿಯಾಗಿ, ಮೋಹವ ಕಳೆದು ನಿರ್ಮೋಹಿಯಾಗಿ, ಮದವ ಕಳೆದು ನಿರ್ಮದವಾಗಿ, ಮತ್ಸರವ ಕಳೆದು ನಿರ್ಮತ್ಸರರಾಗಿಪ್ಪ ಚೆನ್ನಬಸವೇಶ್ವರದೇವರು ಪ್ರಭುರಾಯ ಮುಗ್ಧಸಂಗಯ್ಯ ಘಟ್ಟಿವಾಳಯ್ಯ ಮರುಳಶಂಕರದೇವರು ಮುಖ್ಯವಾದ ಏಳ್ನೂರಯೆಪ್ಪತ್ತು ಅಮರಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Kāma krōdha lōbha mōha mada matsarada sīmegaḷenisi yati sid'dha sādhyarella vratabhraṣṭarādaru. Adu entendoḍe: Kāmavemba agni, krōdhavemba kāṣṭha, lōbhavemba gāḷi puṭamāḍi, mōhavembaraṇya, madavemba kuḷḷu, matsaravemba girige beṅki hatti, suṭṭu suṭṭu bendaru halabaru, nondaru halabaru. Kāmava kaḷedu niḥkāmiyāgi, krōdhava kaḷedu niḥkrōdhiyāgi, lōbhava kaḷedu nirlōbhiyāgi, mōhava kaḷedu nirmōhiyāgi, Madava kaḷedu nirmadavāgi, matsarava kaḷedu nirmatsararāgippa cennabasavēśvaradēvaru prabhurāya mugdhasaṅgayya ghaṭṭivāḷayya maruḷaśaṅkaradēvaru mukhyavāda ēḷnūrayeppattu amaragaṇaṅgaḷa pādakke namō namō embenayya paramaguru paḍuviḍi sid'dhamallināthaprabhuve.