ಅನ್ನದ ಗೊಡವಿಲ್ಲದಾತಂಗೆ ಆರಂಭದ
ಗೊಡವಿಯುಂಟೇ?
ಖೇಚರ ಪವನಸಾಧಕಂಗೆ
ಭೂಚರದಲಡಿಯಿಡುವ ಬಯಕೆಯುಂಟೇ?
ವಜ್ರಾಂಗಿಯ ತೊಟ್ಟಿಪ್ಪಾತಂಗೆ ಬಾಣದ
ಭಯವುಂಟೇನಯ್ಯಾ?
ನಿರ್ಮಾಯಕಂಗೆ ಮಾಯದ ಹಂಗುಂಟೇ?
ನಿರ್ವ್ಯಸನಿಗೆ ವ್ಯಸನದ ಹಂಗುಂಟೇ ?
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೊಳು
ಬೆರೆದಾತಂಗೆ ಅನ್ಯದೈವದ ಹಂಗುಂಟೇ?
Transliteration Annada goḍavilladātaṅge ārambhada
goḍaviyuṇṭē?
Khēcara pavanasādhakaṅge
bhūcaradalaḍiyiḍuva bayakeyuṇṭē?
Vajrāṅgiya toṭṭippātaṅge bāṇada
bhayavuṇṭēnayyā?
Nirmāyakaṅge māyada haṅguṇṭē?
Nirvyasanige vyasanada haṅguṇṭē?
Paramaguru paḍuviḍi sid'dhamallināthanoḷu
beredātaṅge an'yadaivada haṅguṇṭē?