ನೊಂದೆನೀ ಮನದಿಂದಲಿ, ಬೆಂದೆನೀ ಮನದಿಂದಲಿ,
ಕಂದಿದೆನೀ ಮನದಿಂದಲಿ, ಕುಂದಿದೆನೀ ಮನದಿಂದಲಿ.
ಮನವೆಂಬ ಸಂದೇಹದ ಕೀಲ ಕಳೆದು,
ನಿಸ್ಸಂದೇಹಿಯಾಗಿಪ್ಪ ನಿರಾಭಾರಿ
ಶರಣಂಗೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Nondenī manadindali, bendenī manadindali,
kandidenī manadindali, kundidenī manadindali.
Manavemba sandēhada kīla kaḷedu,
nis'sandēhiyāgippa nirābhāri
śaraṇaṅge namō namō embenayyā
paramaguru paḍuviḍi sid'dhamallināthaprabhuve.