•  
  •  
  •  
  •  
Index   ವಚನ - 151    Search  
 
ಸಹಸ್ರಲಕ್ಷ ದ್ರವ್ಯ ದೊರೆದರೂ ಅದು ಸಾಲದೆಂಬುದೀ ಆಸೆಬದ್ಧವೆಂಬ ಮಾಯೆ. ಸಹಸ್ರಲಕ್ಷ ಭೂಮಿ ದೊರೆದರೂ ಅದು ಸಾಲದೆಂಬುದೀ ಆಸೆಬದ್ಧವೆಂಬ ಮಾಯೆ. ಅದು ಎಂತೆಂದರೆ: ಸಾಕ್ಷಿ: ``ಆಶಯಾ ಬದ್ಧತೇ ಲೋಕಃ ಕರ್ಮಣಾ ಬಹುಚಿಂತಯಾ | ಆಶಾ ಚಲ ಪರಮಂ ದುಃಖಂ ನಿರಾಶಾ ಪರಮಂ ಸುಖಂ ||'' ಎಂದುದಾಗಿ, ಈ ಆಸೆ ರೋಷ ಅಮಿಷವೆಂಬ ಮಾಯಾಪಾಶದೊಳಗೆ ಸಿಲ್ಕಿ ನೊಂದೆ ಬೆಂದೆನಯ್ಯಾ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Sahasralakṣa dravya doredarū adu sāladembudī āsebad'dhavemba māye. Sahasralakṣa bhūmi doredarū adu sāladembudī āsebad'dhavemba māye. Adu entendare: Sākṣi: ``Āśayā bad'dhatē lōkaḥ karmaṇā bahucintayā | āśā cala paramaṁ duḥkhaṁ nirāśā paramaṁ sukhaṁ ||'' endudāgi, ī āse rōṣa amiṣavemba māyāpāśadoḷage silki nonde bendenayyā, paramaguru paḍuviḍi sid'dhamallināthaprabhuve.