ಹುಟ್ಟದ ಮುನ್ನ ಬೆಳೆವ ಶಿಶುವ ಹೆಸರಿಟ್ಟು ಕರೆವವರಾರೂಯಿಲ್ಲ.
ಬೆಳೆಯದ ಮುನ್ನ ಹುಟ್ಟಿದ ಶಿಶುವ ಹೆಸರಿಟ್ಟು ಕರೆವವರಾ[ರೂಯಿಲ್ಲ.]
ಶಿಶುವಿನ ತಂದೆ ತಾಯಿಯ ಕುರುಹ ಬಲ್ಲವರು ಮುನ್ನವೆ ಇಲ್ಲ.
ಮುನ್ನವೆಂಬ ಶಬ್ದವ ಎನ್ನೊಳಡಗಿಸಿ ಚಿಹ್ನವಡಸಿದ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Huṭṭada munna beḷeva śiśuva hesariṭṭu karevavarārūyilla.
Beḷeyada munna huṭṭida śiśuva hesariṭṭu karevavarā[rūyilla.]
Śiśuvina tande tāyiya kuruha ballavaru munnave illa.
Munnavemba śabdava ennoḷaḍagisi cihnavaḍasida