•  
  •  
  •  
  •  
Index   ವಚನ - 244    Search  
 
ಕರಸ್ಥಲದ ಲಿಂಗ ಕೈಸೇರಿ ಇರು ತಿರಲನ್ಯ ಭಯಗಳುಂಟೆ ಗುರುವೆ? ಕಂಠೀರ[ವ]ನಿಹ ವನದೊಳು ಕರಿಯಭಯ ವುಂಟೇ ಇನ್ನಾ ತೆರದೊಳು ಬಂಟಾಯುಧವಿರೆ ಕರದೊಳು ಸೂಜಿಯ ಮೊನೆಯ ತುಂಟಕದ ಭಯಗಳುಂಟೆ ಗುರವೆ? | 1 | ಕರಿಯನೇರಿ ಪೋಗುತಿರಲು ಶುನಿ ಬಗುಳುತ ಬರುತಿರುವ ಭಯಗಳುಂಟೆ ನೋಡಾ. ಹರನೆನ್ನ ಕರದೊಳಿರಲು ಪಂಚೇಂದ್ರಿ ದುರಿತ ಭಯದಂಜಿಕೆಯುಂಟೆ ಗುರುವೆ? | 2 | ದ್ಯುಮಣಿಗುರಿಯ ಭಯಗಳುಂಟೆ? ಅಷ್ಟದಳ ಕಮಲದೊಳು ಸುಳಿವ ಹಂಸ ತಾನೆ ಭ್ರಮರನಂತೆ ಕರಕಮಲದ ಲಿಂಗವ ತಾ ಭ್ರಮಿಸೆರಗೆ ಭಯಗಳುಂಟೆ ಗುರುವೆ? | 3 | ಉರಿಯುತಿರೆ ಜ್ಯೋತಿ ಗೃಹದಿ ತಮ ನಡೆದು ಬರುವ ಭೀತಿಯುಂಟೆ ನೋಡಾ. ಪರಂಜ್ಯೋತಿರ್ಲಿಂಗಯೆನ್ನ ಅಂಗಾಕಾರದೆ ಇರೆ ಮಾಯದ ಭೀತಿಯುಂಟೆ ಗುರುವೆ? | 4 | ಉರಗ ಮುಟ್ಟಲು ಓರ್ವನ ತನು ವಿಷದಿ ಭರಿತವಾದಂತೆ ಶರಣ ಶರೀರವನು ಸೊಮ್ಮು ಸೋಂಕಿ ಸರ್ವಾಂಗ ಕಾರಣಲಿಂಗವಾಗೆ ಭಯವೆ ಗುರುವೆ? |5 | ಅಗಲದೆ ಸರ್ವಾಂಗದಿ ಭರಿತವಾದಂತೆ ಶರಣ ಶಿವಲಿಂಗ ಝಗಝಗಿಸುತಿದೆ ಕೋಯೆಂದು ನುಡಿದು ಪೊಗಳ್ದ ಹೇಮಗಲ್ಲ ಹಂಪ ಪಡುವಿಡಿಯ ಬಗೆಯ ಗುರು ರಾಚನಿರವು ತಾನೆ | 6 ]
Transliteration Karasthalada liṅga kaisēri iru tiralan'ya bhayagaḷuṇṭe guruve? Kaṇṭhīra[va]niha vanadoḷu kariyabhaya vuṇṭē innā teradoḷu baṇṭāyudhavire karadoḷu sūjiya moneya tuṇṭakada bhayagaḷuṇṭe gurave? | 1 | Kariyanēri pōgutiralu śuni baguḷuta barutiruva bhayagaḷuṇṭe nōḍā. Haranenna karadoḷiralu pan̄cēndri durita bhayadan̄jikeyuṇṭe guruve? | 2 |Dyumaṇiguriya bhayagaḷuṇṭe? Aṣṭadaḷa kamaladoḷu suḷiva hansa tāne bhramaranante karakamalada liṅgava tā bhramiserage bhayagaḷuṇṭe guruve? | 3 | Uriyutire jyōti gr̥hadi tama naḍedu baruva bhītiyuṇṭe nōḍā. Paran̄jyōtirliṅgayenna aṅgākārade ire māyada bhītiyuṇṭe guruve? | 4 |Uraga muṭṭalu ōrvana tanu viṣadi bharitavādante śaraṇa śarīravanu som'mu sōṅki sarvāṅga kāraṇaliṅgavāge bhayave guruve? |5 | Agalade sarvāṅgadi bharitavādante śaraṇa śivaliṅga jhagajhagisutide kōyendu nuḍidu pogaḷda hēmagalla hampa paḍuviḍiya bageya guru rācaniravu tāne | 6]