ಬಾಲೇಂದುಪುರದ ಹರೀಶ್ವರ ಪರ್ವತದೇವರ ಶಿಷ್ಯರು
ಮಹಾಂತ ಮಲ್ಲಿಕಾರ್ಜುನ ದೇವರು
ಅವರ ಶಿಷ್ಯರು ಶಾಂತವೀರ ದೇವರು
ಅವರ ಕರ ಸರಸಿಜ ಸಂಜಾತ ಪರ್ವತ ನಾನಯ್ಯ.
ಬಾಲೇಂದು ಪುರವೆಂದರೆ ಚಂದ್ರ ಸಂಜ್ಞೆಯನ್ನುಳಂಗ
ಆ ಸ್ಥಲಾಂದಲ್ಲಿ ನೆಲೆಗೊಂಡಿರ್ದ ಇಷ್ಟಲಿಂಗ
‘ಹರಿ’ ಎಂದರೆ ಮನಸ್ಸು
ಆ ಮನಸಂಬಂಧವಾದ
ಸೂಕ್ಷ್ಮಾಂಗದಲ್ಲಿಂಬುಗೊಂಡಿರ್ದ ಪ್ರಾಣಲಿಂಗ ‘ಈಶ್ವರ’ ಎಂದರೆ
ಕಾರಣಾಂಗಕ್ಕೊಡೆಯನಾದ ಭಾವಲಿಂಗ.
‘ಪುರ’ವೆಂದರೆ ತ್ರಿಪುರ ಸಂಜ್ಞೆಯನುಳ್ಳ ತನಯತ್ರಯ.
ಆ ತ್ರಿವಿಧಾಂಗದೊಳ್ ತ್ರಿವಿಧ ಲಿಂಗವಾಗಿ ನಿವಾಸವಾಗಿರ್ದ
ಶ್ರೀಗುರು ದೇವಂಗೆ ನಮಸ್ಕಾರವಯ್ಯ
ಶಾಂತವೀರೇಶ್ವರಾ
Transliteration Bālēndupurada harīśvara parvatadēvara śiṣyaru
mahānta mallikārjuna dēvaru
avara śiṣyaru śāntavīra dēvaru
avara kara sarasija san̄jāta parvata nānayya.
Bālēndu puravendare candra san̄jñeyannuḷaṅga
ā sthalāndalli nelegoṇḍirda iṣṭaliṅga
‘hari’ endare manas'su
ā manasambandhavāda
sūkṣmāṅgadallimbugoṇḍirda prāṇaliṅga ‘īśvara’ endare
kāraṇāṅgakkoḍeyanāda bhāvaliṅga.
‘Pura’vendare tripura san̄jñeyanuḷḷa tanayatraya.
Ā trividhāṅgadoḷ trividha liṅgavāgi nivāsavāgirda
śrīguru dēvaṅge namaskāravayya
śāntavīrēśvarā