ಶಿವಮಂತ್ರ ಪಿಂಡವಪ್ಪ ತನ್ನ ಹೃದಯ ಕಮಲದಲ್ಲಿ
ಆಹ್ವಾನದ ದೆಸೆಯಿಂದ ಸಂಯುಕ್ತವಾದ ಶಿವಲಿಂಗದಲ್ಲಿ
ಮಂತ್ರ ಪತಿಯಪ್ಪ ವರ್ಣವಾಸ ಮೊದಲಾಗಿ
ಶಿವವಾಸ ಪರ್ಯಂತರವಾದ ವಾಸದಿ ಮಂತ್ರದ ಭಾವದಿಂದ
ಲಿಂಗ ಪೂಜೆಯಧಿಕವಪ್ಪುದು.
ಅಂತರಂಗಾರ್ಚನೆಯ ಮಾಡುವ ಶುದ್ಧಶೈವನು
ಮಂತ್ರ ಸ್ವರೂಪವಾದ ಶರೀರಯಹನು.
ಅಂತದರಿಂದಾತನು ಪರಮ ಶಿವನಪ್ಪನು.
ಈ ಪ್ರಕಾರದಿಂದ ಶುದ್ಧಶೈವವು ನಿರೂಪಿತವಾಯಿತಯ್ಯ
ಶಾಂತವೀರೇಶ್ವರಾ
ಸೂತ್ರ: ಅಲ್ಲಿಂದ ಮೇಲೆ ವೀರಶೈವವೆಂತೆಂದೊಡೆ, ಈ ಪ್ರಕಾರದಿಂದ ಹೇಳಲಾದ ಷಡ್ದರ್ಶನ ಷಟ್ಯೈವಕ್ಕತೀತವಾದ ವೀರಶೈವವು ಹೇಗೆಂದರೆ, ಈ ಪ್ರಕಾರದಿಂ ವೇದಾಗಮೈಕ್ಯವನು ಪ್ರತಿಪಾದಿಸಿ, ಇನ್ನು ಶಿವಸಿದ್ಧಾಂತದ ಉತ್ತರ ಪಕ್ಷದಲ್ಲಿ ವೀರಶೈವ ಮತವನು ತೋರಿಸುತಿರ್ದಪಂ.
Transliteration Śivamantra piṇḍavappa tanna hr̥daya kamaladalli
āhvānada deseyinda sanyuktavāda śivaliṅgadalli
mantra patiyappa varṇavāsa modalāgi
śivavāsa paryantaravāda vāsadi mantrada bhāvadinda
liṅga pūjeyadhikavappudu.
Antaraṅgārcaneya māḍuva śud'dhaśaivanu
mantra svarūpavāda śarīrayahanu.
Antadarindātanu parama śivanappanu.
Ī prakāradinda śud'dhaśaivavu nirūpitavāyitayya
śāntavīrēśvarāSūtra: Allinda mēle vīraśaivaventendoḍe, ī prakāradinda hēḷalāda ṣaḍdarśana ṣaṭyaivakkatītavāda vīraśaivavu hēgendare, ī prakāradiṁ vēdāgamaikyavanu pratipādisi, innu śivasid'dhāntada uttara pakṣadalli vīraśaiva matavanu tōrisutirdapaṁ.