•  
  •  
  •  
  •  
Index   ವಚನ - 119    Search  
 
ಬಳಿಕಾ ಲಿಂಗದಲಿ ಶಿವಕಲಾ ಪ್ರತಿಷ್ಠೆಯನು ಮಾಡುವುದೆಂತೆದೊಡೆ: ಸರ್ವ ಲಕ್ಷಣ ಶಿಲ್ಪ ಶಾಸ್ತ್ರೋಕ್ತವಾದ ಸರ್ವ ಸಂಪನ್ನವಾದ ಪಂಚಗವ್ಯಂಗಳಿಂದ ಶುದ್ದ ಮಾಡಿದ ಪಂಚಾಮೃತಗಳಿಂದಭಿಷೇಕವ ಮಾಡಿದ ಗಂಧ ಪುಷ್ಪದುಪಚಾರಂಗಳಿಂದ ಪೂಜೆ ಮಾಡಿದ ‘ಶ್ರೀರುದ್ರ’ ಮಧ್ಯ ಗತವಾದ ಪಂಚಾಕ್ಷರ ಮಂತ್ರದಿಂದ ಪವಿತ್ರವಾದ ಕರಪೀಠದಲ್ಲಿರುವ ಆ ಲಿಂಗದಲ್ಲಿ ಅಚಾರ್ಯನು ಶಿಷ್ಯನ ಮಸ್ತಕದಲ್ಲಿ ಚಿನ್ಮಯವಾದ ಶಿವಕಲೆಯನು ವಿದ್ಯುಕ್ತವಾಗಿ ಕೂಡಿಸುವುದಯ್ಯ ಶಾಂತವೀರೇಶ್ವರಾ
Transliteration Baḷikā liṅgadali śivakalā pratiṣṭheyanu māḍuvudentedoḍe: Sarva lakṣaṇa śilpa śāstrōktavāda sarva sampannavāda pan̄cagavyaṅgaḷinda śudda māḍida pan̄cāmr̥tagaḷindabhiṣēkava māḍida gandha puṣpadupacāraṅgaḷinda pūje māḍida ‘śrīrudra’ madhya gatavāda pan̄cākṣara mantradinda pavitravāda karapīṭhadalliruva ā liṅgadalli acāryanu śiṣyana mastakadalli cinmayavāda śivakaleyanu vidyuktavāgi kūḍisuvudayya śāntavīrēśvarā