ಈ ಪ್ರಕಾರದಿಂದ ಭಿನ್ನ ಲಿಂಗವನು
ದೇಹ ಪ್ರಾಣಾಭಿಲಾಷೆಯುಳ್ಳವನಾಗಿ
ಮರಳಿ ಸಜ್ಜ ರಸಾದಿಗಳಿಂದ ಬಂಧನವ ಮಾಡಿ ಧರಿಸಿದೊಡೆ
ಆತನು ವರಾಹದ ಗರ್ಭದಲ್ಲಿ ಹುಟ್ಟುತ್ತಮಿಹನು,
‘ಎಲೆ ಪಾರ್ವತಿಯೆ ಕೇಳು’ ಎಂದು
ಈಶ್ವರನು ನಿರೂಪಿಸಿರುವನು.
Transliteration Ī prakāradinda bhinna liṅgavanu
dēha prāṇābhilāṣeyuḷḷavanāgi
maraḷi sajja rasādigaḷinda bandhanava māḍi dharisidoḍe
ātanu varāhada garbhadalli huṭṭuttamihanu,
‘ele pārvatiye kēḷu’ endu
īśvaranu nirūpisiruvanu.