ಎಲೆ ಶಿವನೆ, ನಿನ್ನ ಮಂಗಲವಾದ
ಆವುದಾನೊಂದು ಲಿಂಗ ರೂಪವಾದ
ಮೂರ್ತಿಯ ದೆಸೆಯಿಂದ [ಯಾವುದೇ]ಭಯವಿಲ್ಲ.
ಪಾಪರಹಿತವಾಗಿರ್ಪುದು ಎಂದು
ಯಜುರ್ವೇದದಿಂದ ತಿಳಿಯುವುದು
ಅದು ಕಾರಣ ಶಿವಲಿಂಗ ಸಂಬಂಧ
ಉಳ್ಳಾತನು ಸರ್ವ ಪಾಪರಹಿತನಯ್ಯ ಶಾಂತವೀರೇಶ್ವರಾ
Transliteration Ele śivane, ninna maṅgalavāda
āvudānondu liṅga rūpavāda
mūrtiya deseyinda [yāvudē]bhayavilla.
Pāparahitavāgirpudu endu
yajurvēdadinda tiḷiyuvudu
adu kāraṇa śivaliṅga sambandha
uḷḷātanu sarva pāparahitanayya śāntavīrēśvarā