•  
  •  
  •  
  •  
Index   ವಚನ - 213    Search  
 
ಆ ರುದ್ರಾಕ್ಷೆಯ ತೊಡುವ ಮೊದಲು ಓಂಕಾರದ ಅಯ್ದು ಮುಖಂಗಳು ಪಂಚಾಕ್ಷರಗಳೆಂದು ಅರಿವರು, ಆ ರುದ್ರಾಕ್ಷೆಯ ನಾಳವು ಭಕ್ತರ ಹೃದಯದಲ್ಲಿ ನಾಳವು, ಆ ರುದ್ರಕ್ಷೆಯ ನಾಳದ ನೂಲು ಜ್ಞಾನಸೂತ್ರವಾಗಿಹದಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಲಿಂಗಧಾರಣೆಯಾದ ವಿಭೂತಿ ಧಾರಕನಾದ ಪಂಚಾಕ್ಷರಿ ಮಂತ್ರ ನಿತ್ಯ ಲಿಂಗಾರ್ಚಕನಾದ ಲಿಂಗ ಸಂಪತ್ತಿಯುಳ್ಳವಂಗೆ ಪ್ರಮಾಣದೊಡನೆ ಕೂಡಿದ ಪಂಚಾಕ್ಷರಿ ಮಂತ್ರವು ಜಪವು ಅವಶ್ಯಕವಾದುದರಿಂದ ಮುಂದೆ ಪಂಚಾಕ್ಷರಿ ಸ್ಥಲವಾದುದು.
Transliteration Ā rudrākṣeya toḍuva modalu ōṅkārada aydu mukhaṅgaḷu pan̄cākṣaragaḷendu arivaru, ā rudrākṣeya nāḷavu bhaktara hr̥dayadalli nāḷavu, ā rudrakṣeya nāḷada nūlu jñānasūtravāgihadayya śāntavīrēśvarā Sūtra: Ī prakāradinda liṅgadhāraṇeyāda vibhūti dhārakanāda pan̄cākṣari mantra nitya liṅgārcakanāda liṅga sampattiyuḷḷavaṅge pramāṇadoḍane kūḍida pan̄cākṣari mantravu japavu avaśyakavādudarinda munde pan̄cākṣari sthalavādudu.