ಧರಿಸಿದ ಲಿಂಗ ಮಾಂಗಲ್ಯವಾದ ಭಸ್ಮ ರುದ್ರಾಕ್ಷೆಯಿಂದ ಪವಿತ್ರನಾಗಿ
ಶಿವಲಿಂಗ ಧಾರಕನು ಪರಶಿವ ತತ್ತ್ವವನು ಅರುಹುತಿರ್ದನು.
‘ನಮಃ ಶಿವಾಯ ಚ| ಶಿವೇತರಾಯ ಚ|’ ಎಂದು
‘ಶ್ರೀರುದ್ರ’ ಮಂತ್ರದಲ್ಲಿ ಪ್ರಸಿದ್ಧವಾದ ಪಂಚಾಕ್ಷರಿ ವಿದ್ಯೆಯನು
ಮಾನಸೋಪಾಂಶುವಾದ ವಾಚಿಕ ಸ್ವರೂಪಿನಿಂದ ಉಚ್ಚರಿಸಬೇಕು.
“ಜಪ ವ್ಯಕ್ತಾಯಾಂ ವಾಚಿ” ಎಂಬ ಧಾತುವಯ್ಯ
ಶಾಂತವೀರೇಶ್ವರಾ
Transliteration Dharisida liṅga māṅgalyavāda bhasma rudrākṣeyinda pavitranāgi
śivaliṅga dhārakanu paraśiva tattvavanu aruhutirdanu.
‘Namaḥ śivāya ca| śivētarāya ca|’ endu
‘śrīrudra’ mantradalli prasid'dhavāda pan̄cākṣari vidyeyanu
mānasōpānśuvāda vācika svarūpininda uccarisabēku.
“Japa vyaktāyāṁ vāci” emba dhātuvayya
śāntavīrēśvarā