•  
  •  
  •  
  •  
Index   ವಚನ - 270    Search  
 
ಉಂಗುಷ್ಠ ತರ್ಜನಿಗಳಿಂ ಧ್ವನಿಯಪ್ಪಂತೆ ಇಂದ್ರಾದಿ ದಶ ದಿಕ್ಕುಗಳಲ್ಲಿ ಅಸ್ತ್ರ ಪಲ್ಲವ ಪ್ರಯೋಗಿಸುವುದ ಬಳಿಕ ಯ ಕಾರಾದಿ ನ ಕರಾಂತಮಾಗೆ ‘ಸೃಷ್ಠಮಂತ್ರ’ವೆನಿಸುವುದು ನಕಾರಾದಿ ಯಕಾರಾಂತಮಾಗೆ ‘ಸಂಹಾರ ಮಂತ್ರ’ವೆನಿಸುವುದು. ಶಿಕಾರಾದಿ ಮಕಾರಂತಮಾಗೆ ‘ಸ್ಥಿತಿ ಮಂತ್ರ’ವಹುದು ಅವರಲ್ಲಿ ಸ್ತ್ರೀ ಶೂದ್ರರಿಗೆ ಪ್ರಣಮವಿಲ್ಲದೆ ನಮೋಂತಮಾದ ‘ಸ್ಥಿತಿ ಮಂತ್ರ’ವನೆ ಜಪಂಗೈಯ್ವುದಯ್ಯ ಶಾಂತವೀರೇಶ್ವರಾ
Transliteration Uṅguṣṭha tarjanigaḷiṁ dhvaniyappante indrādi daśa dikkugaḷalli astra pallava prayōgisuvuda baḷika ya kārādi na karāntamāge ‘sr̥ṣṭhamantra’venisuvudu nakārādi yakārāntamāge ‘sanhāra mantra’venisuvudu. Śikārādi makārantamāge ‘sthiti mantra’vahudu avaralli strī śūdrarige praṇamavillade namōntamāda ‘sthiti mantra’vane japaṅgaiyvudayya śāntavīrēśvarā