ಅಂಗ ಆಪ್ತ ಸ್ಥಾನವೆಂಬ ಸದ್ಭಾವವೆಂಬ
ಚರ್ತುವಿಧ ಭಕ್ತಿಯಿಂದ ಗುರುವನರ್ಚಿಸುವುದಯ್ಯ
‘ಮನ ಮನನ ಮನನೀಯ’ವೆಂಬ ತ್ರಿವಿಧದಿಂದ
ಶಿವಲಿಂಗವ ಭಜಿಸುವುದಯ್ಯ.
ಧನ ಮಮಕಾರ ಸಂಗ್ರಹವೆಂಬುದನು
ಜಂಗಮಕ್ಕೆ ಸಮರ್ಪಿಸುವುದಯ್ಯ ಶಾಂತವೀರೇಶ್ವರಾ
Transliteration Aṅga āpta sthānavemba sadbhāvavemba
cartuvidha bhaktiyinda guruvanarcisuvudayya
‘mana manana mananīya’vemba trividhadinda
śivaliṅgava bhajisuvudayya.
Dhana mamakāra saṅgrahavembudanu
jaṅgamakke samarpisuvudayya śāntavīrēśvarā