ಗುರುವಿಂಗೆ ತನುವನರ್ಪಿಸಿ
ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಮನವನರ್ಪಿಸಿ
ಚರಲಿಂಗಕ್ಕೆ ಅನ್ನಾಚ್ಛಾದನಾಲಂಕಾರಾಗಳಿಂ ಧನವನರ್ಪಿಸಿ
ಇಂತೀ ತ್ರಿವಿಧವು ತ್ರಿವಿಧ ಪ್ರಸಾದಮಾಗಾಳ್ಳಾತನೆ ತ್ರಿವಿಧ ಭಕ್ತನಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ, ತ್ರಿವಿಧ ಸಂಪತ್ತಿ ಸ್ಥಲದಲ್ಲಿ ಲೋಲುಪ್ತನಾದ ಭಕ್ತನ ಶರೀರದಲ್ಲಿ ಗುರುಭಕ್ತಿ ಮನದಲ್ಲಿ ಲಿಂಗಭಕ್ತಿ, ಜ್ಞಾನದಲ್ಲಿ, ಜಂಗಮಭಕ್ತಿ ಪರಿಣಾಮದಲ್ಲಿ ಪ್ರಸಾದಭಕ್ತಿ ನಿಶ್ಚಿತವಾದ ಭೇದವೆಂತೆನೆ ಮುಂದೆ ಚತುರ್ವಿಧ ಸಾರಾಯಸ್ಥಲವಾದುದು.
Transliteration Guruviṅge tanuvanarpisi
iṣṭaliṅgakke aṣṭavidhārcane ṣōḍaśōpacāradinda manavanarpisi
caraliṅgakke annācchādanālaṅkārāgaḷiṁ dhanavanarpisi
intī trividhavu trividha prasādamāgāḷḷātane trividha bhaktanayya
śāntavīrēśvarā
sūtra: Ī prakāradinda, trividha sampatti sthaladalli lōluptanāda bhaktana śarīradalli gurubhakti manadalli liṅgabhakti, jñānadalli, jaṅgamabhakti pariṇāmadalli prasādabhakti niścitavāda bhēdaventene munde caturvidha sārāyasthalavādudu.