ಶಿವಭಕ್ತನು ಗೃಹದಲ್ಲಿ ಭಸ್ಮಾಂಗಿಯಾದ ಶಿವಯೋಗಿಯು
ಮೂರ್ಖನಾದರೂ ಬಲ್ಲವನಾದರೂ
ಶಿವಲಿಂಗಾರ್ಪಣ ಮಾಡುವನು.
ಅಲ್ಲಿ ಮಹಾದೇವನು ಅಂಬಿಕಾ ಸಮೇತನಾಗಿ
ವೃಷಭ ಧ್ವಜವುಳ್ಳವನಾಗಿ ಭುಂಜಿಸುತ್ತಿಹನಯ್ಯ
ಶಾಂತವೀರೇಶ್ವರಾ
Transliteration Śivabhaktanu gr̥hadalli bhasmāṅgiyāda śivayōgiyu
mūrkhanādarū ballavanādarū
śivaliṅgārpaṇa māḍuvanu.
Alli mahādēvanu ambikā samētanāgi
vr̥ṣabha dhvajavuḷḷavanāgi bhun̄jisuttihanayya
śāntavīrēśvarā