ಮಾಡಿದ ಪದಾರ್ಥವ ಎಲ್ಲವನು
ಗಂಗಳ ತುಂಬ ನೀಡಿಸಿಕೊಂಡಾ ಲಿಂಗಕ್ಕರ್ಪಿಸಿದ ಬಳಿಕ
ಲಿಂಗಕ್ಕೆ ಕೊಟ್ಟೆವೆಂದು. ಲಿಂಗವ ಸಜ್ಜೆ ವಸ್ತ್ರಂಗಳಲ್ಲಿ ಕಟ್ಟಿಕೊಂಡು
ಹೊಟ್ಟೆಯ ತುಂಬಿಕೊಂಡವರಿಗೆ ಪ್ರಸಾದವಿಲ್ಲವಯ್ಯ.
ತಟ್ಟುವ ಮುಟ್ಟುವ ಭೇದವನರಿದು
ಕಾಯದ ಕರದಲ್ಲಿ ಇಷ್ಟಲಿಂಗದ ಮುಖವೈದನರಿದು
ಸಕಲ ಪದಾರ್ಥವನು ಅರ್ಪಿಸಿ
ಆ ಲಿಂಗ ಪ್ರಸಾದವ ಕೊಳಬಲ್ಲರೆ ಆತನೆ ಪ್ರಸಾದಿಯಯ್ಯ
ಶಾಂತವೀರೇಶ್ವರಾ
Transliteration Māḍida padārthava ellavanu
gaṅgaḷa tumba nīḍisikoṇḍā liṅgakkarpisida baḷika
liṅgakke koṭṭevendu. Liṅgava sajje vastraṅgaḷalli kaṭṭikoṇḍu
hoṭṭeya tumbikoṇḍavarige prasādavillavayya.
Taṭṭuva muṭṭuva bhēdavanaridu
kāyada karadalli iṣṭaliṅgada mukhavaidanaridu
sakala padārthavanu arpisi
ā liṅga prasādava koḷaballare ātane prasādiyayya
śāntavīrēśvarā