ಶಿವಪ್ರಸಾದ ದೊರೆಯುತ್ತಿರಲಾಗಿ
ಹುಳುವಾದೊಡೆಯು ಪಕ್ಷಿಯಾದೊಡೆಯು
ಮನುಷ್ಯನಾದೊಡೆಯು ದೇವತೆಯಾದೊಡೆಯು
ರಾಕ್ಷಸನಾದೊಡೆಯು
ಉತ್ತಮವಾದ ಜ್ಞಾನವನು ಪಡೆಯುತ್ತಿರ್ಪನಯ್ಯ.
ಯಜ್ಞಂಗಳು ತಪಸ್ಸುಗಳು
ಪಂಚಾಕ್ಷರಾದಿ ಮಂತ್ರಂಗಳ ಜಪ ಧ್ಯಾನ ಶಿವಜ್ಞಾನವು
ಪರಮೇಶ್ವರನ ಪ್ರಸನ್ನತೆಗೊಸ್ಕರ ಹೇಳಲಾಗಿದೆ.
ಇಲ್ಲಿ ಸಂದೇಹವಿಲ್ಲವಯ್ಯ ಶಾಂತವೀರೇಶ್ವರಾ
Transliteration Śivaprasāda doreyuttiralāgi
huḷuvādoḍeyu pakṣiyādoḍeyu
manuṣyanādoḍeyu dēvateyādoḍeyu
rākṣasanādoḍeyu
uttamavāda jñānavanu paḍeyuttirpanayya.
Yajñaṅgaḷu tapas'sugaḷu
pan̄cākṣarādi mantraṅgaḷa japa dhyāna śivajñānavu
paramēśvarana prasannategoskara hēḷalāgide.
Illi sandēhavillavayya śāntavīrēśvarā