ನೀವಾರ ಶೂಕಮೆನಲೇಂ
ರಾಜಾನ್ನದಾ ಸುಂಕಿನೋಪಾದಿಯಲ್ಲಿ
ಸೂಕ್ಷ್ಮವಾಗಿ ಪೀತವರ್ಣವಾಗಿ ಪ್ರಕಾಶಿಸುತ್ತಿರ್ದ
ಅಣುವಿನೋಪಾದಿಯಲ್ಲಿ ಶಿಖೆಯುಂಟು.
ಅಂಥಾ ಶಿಖೆಯ ಮಧ್ಯದಲ್ಲಿ ಪರಮಾತ್ಮ ಲಿಂಗವು
ವಿಶೇಷವಾಗಿ ಇರುತ್ತಿದ್ದಿತ್ತು.
ಪ್ರಾಣವೆ ಬಿಲ್ಲು ಮನಸ್ಸು ಬಾಣವು
ಪರಬ್ರಹ್ಮನೆ ಆ ಬಾಣಕ್ಕೆ ಗುರಿ ಎಂದು ಹೇಳುವರು.
ಮರವೆ ಇಲ್ಲದುದರಿಂದ ಭೇದಿಸಲ್ತಕ್ಕುದು.
ಆ ಬಾಣದೋಪಾದಿಯಲ್ಲಿ ಪರಬ್ರಹ್ಮಸ್ವರೂಪವಾದವನೆ
ಶಾಂತವೀರೇಶ್ವರಾ
Transliteration Nīvāra śūkamenalēṁ
rājānnadā suṅkinōpādiyalli
sūkṣmavāgi pītavarṇavāgi prakāśisuttirda
aṇuvinōpādiyalli śikheyuṇṭu.
Anthā śikheya madhyadalli paramātma liṅgavu
viśēṣavāgi iruttiddittu.
Prāṇave billu manas'su bāṇavu
parabrahmane ā bāṇakke guri endu hēḷuvaru.
Marave illadudarinda bhēdisaltakkudu.
Ā bāṇadōpādiyalli parabrahmasvarūpavādavane
śāntavīrēśvarā