•  
  •  
  •  
  •  
Index   ವಚನ - 647    Search  
 
ನೈರುತ್ಯ ಭಾಗದಲ್ಲಿ ರಜತ ಕಳಸ. ಸುರಹೊನ್ನೆಯ ಪುಷ್ಪದ ಪೂಜೆ. ಸುರಗಿಯ ತಳಿರು. ಧವಳವೆಂಬ ಗಂಗೆ ಹೇಮಗಿರಿಯೆ ಪರ್ವತ ಚೂತವೆಂಬ ವೃಕ್ಷ ನಂದೆ ಎಂಬ ದೇನು ಪೃಥ್ವಿ ಭೂತ ಸಮಾನ ವಾಯು ಕ್ರಿಯಾಶಕ್ತಿ ರುದ್ರತತ್ವ ಸದ್ಯೋಜಾತ ಮುಖ ಸಾಮವೇದ ಶಾಖೆ ‘ಓಂ ಯಜ್ಞೇನ ಯಜ್ಞಮಯಂ ಓಂ ತದೇವಸ್ತನಿ ಧರ್ಮಣಂ ಪ್ರಥಮಂ ನ್ಯಾಸತೇಹಾದಾಂತಾಯ ಹಿಮಂ ನಾಸ್ಯ ಓಂ ಛಂ ವತ್ರ ಪೂರ್ವೇಸಾಧ್ಯ ಸಮಿತಿ ಸಂಬಾ ಸಿಪಿಂದ ಮತಿ ಸಂಪ್ರದೇವ್ಯೋದ್ಯೋಯಿ ದೇವ ಭೂಮಿ ಜನಯಂ ದೇವಾಯಕ’ ಎಂದು ‘ಶಿ’ಕಾರದೇಹ ಶ್ವೇತವರ್ಣ ಕಾಸ್ಯಪರ ಗೋತ್ರ ಅನುಷ್ಟುಪ್ ಛಂದಸ್ಸು ‘ಮ’ಕಾರ ಬೀಜಾಕ್ಷರ ಷಡಕ್ಷರ ಮಂತ್ರ ಅಧಿದೇವತೆ ರುದ್ರನು. ಅಲ್ಲಿಯ ಆಚಾರ್ಯರು ಏಕೋರಾಮಯ್ಯದೇವರು ಆತನಂಗೆ ಶ್ಯಾಮವರ್ಣ, ಪ್ರಣವವೆ ಧ್ವಜವು. ಏಕ ಶಿಖೆ ಚಕ್ರ ಮುಕುಟ. ಬೆತ್ತದಂಡ ವಿಚಾರ ಖರ್ಪರ ‘ಭಿಕ್ಷಾನ್ನ ದೇವಾನ್ನ ಶಿವಾ’ ಎಂಬ ಶಬ್ದ ರಜತ ಮುದ್ರೆ ದೇಹದಲ್ಲಿ ಯಜ್ಞೋಪವೀತ ಸದ್ಯೋಜಾತ ಕಂಠದಲ್ಲಿ ರತ್ನಗಂಬಳಿಯ ಗದ್ದುಗೆ ಶ್ವೇತಾಂಬರ ಬೆಳ್ಳಿಯ ಸೂಜಿ ಬಿಳಿಯ ದಾರ ಅರುಹೆಂಬ ಸೂಜಿ ಪರವೆಂಬ ದಾರ ಉತ್ತಮಾಂಗದಲ್ಲಿ ಧರಿಸಿದ ಪ್ರಾಣಲಿಂಗ ಭೋಗ ಮಲ್ಲಿಕಾರ್ಜುನದೇವರು. ಗೋಮೇಧಿಕ ವರ್ಣ ಸದ್ಯೋಜಾತ ಮುಖ ಪಶ್ಚಿಮ ದಿಕ್ಕು ಹಸ್ತಿ ವಾಹನ ಜ್ಞಾನ ಪೀಠಿಕೆ ರತ್ನಗಂಬಳಿಯ ಗದ್ದುಗೆಯ ಮೇಲೆ ಭದ್ರಾಸನದಲ್ಲಿ ಕುಳ್ಳಿರ್ದು ಷಡಕ್ಷರಿಯ ಜಪವ ಮಾಡುತ್ತಿಪ್ಪರು ಏಕೋರಾಮಯ್ಯದೇವರು ಶಾಂತವೀರೇಶ್ವರಾ
Transliteration Nairutya bhāgadalli rajata kaḷasa. Surahonneya puṣpada pūje. Suragiya taḷiru. Dhavaḷavemba gaṅge hēmagiriye parvata cūtavemba vr̥kṣa nande emba dēnu pr̥thvi bhūta samāna vāyu kriyāśakti rudratatva sadyōjāta mukha sāmavēda śākhe ‘ōṁ yajñēna yajñamayaṁ ōṁ tadēvastani dharmaṇaṁ prathamaṁ n'yāsatēhādāntāya himaṁ nāsya ōṁ chaṁ vatra pūrvēsādhya samiti sambā sipinda mati sampradēvyōdyōyi dēva bhūmi janayaṁ dēvāyaka’ endu ‘śi’kāradēha śvētavarṇa kāsyapara gōtra anuṣṭup chandas'su ‘ma’kāra bījākṣara ṣaḍakṣara mantra Adhidēvate rudranu. Alliya ācāryaru ēkōrāmayyadēvaru ātanaṅge śyāmavarṇa, praṇavave dhvajavu. Ēka śikhe cakra mukuṭa. Bettadaṇḍa vicāra kharpara ‘bhikṣānna dēvānna śivā’ emba śabda rajata mudre dēhadalli yajñōpavīta sadyōjāta kaṇṭhadalli ratnagambaḷiya gadduge śvētāmbara beḷḷiya sūji biḷiya dāra aruhemba sūji paravemba dāra uttamāṅgadalli dharisida prāṇaliṅga bhōga mallikārjunadēvaru. Gōmēdhika varṇa sadyōjāta mukha paścima dikku hasti vāhana jñāna pīṭhikeRatnagambaḷiya gaddugeya mēle bhadrāsanadalli kuḷḷirdu ṣaḍakṣariya japava māḍuttipparu ēkōrāmayyadēvaru śāntavīrēśvarā