ಸಾಕಾರವಿಡಿದು ಅರ್ಚನೆ ಪೂಜನೆಯ ಮಾಡುವುದು
ನಿರಾಕಾರವ ನಂಬಲಾಗದು.
ಶ್ರೀಗುರು ಪ್ರಾಣಲಿಂಗವನು ಕರಸ್ಥಲಕ್ಕೆ ಕೊಟ್ಟ ಬಳಿಕ
ಮತ್ತೆ ಬೇರೆ ಪ್ರಾಣಲಿಂಗ ಉಂಟೆಂದು ಅರಸಲಾಗದು.
ಒಳಗಿರ್ಪುದೆ ಲಿಂಗವು? ಮಲಮೂತ್ರ ಮಾಂಸಗಳ ತನ್ನಿಷ್ಟಲಿಂಗದಲ್ಲಿ
ಸಂಯೋಗಿಸಬಲ್ಲಾತನೆ ಪ್ರಾಣಲಿಂಗಿಯಯ್ಯ
ಶಾಂತವೀರೇಶ್ವರಾ
Transliteration Sākāraviḍidu arcane pūjaneya māḍuvudu
nirākārava nambalāgadu.
Śrīguru prāṇaliṅgavanu karasthalakke koṭṭa baḷika
matte bēre prāṇaliṅga uṇṭendu arasalāgadu.
Oḷagirpude liṅgavu? Malamūtra mānsagaḷa tanniṣṭaliṅgadalli
sanyōgisaballātane prāṇaliṅgiyayya
śāntavīrēśvarā