ಶೋಭನವಾದ ಬುದ್ಧಿಯುಳ್ಳ ಸ್ವಯ
ಲಿಂಗವಾದ ಯತೀಶ್ವರನು
ಎಲ್ಲಾ ಕಡೆಗಳಲ್ಲಿ ಸಂಸಾರ ಚಕ್ರದಲ್ಲಿರುವ
ಸಮಸ್ತ ಪ್ರಾಣಿಗಳನು
ನೋಡುತ್ತ ಆಶ್ಚರ್ಯಬಡುತ್ತ
ಪರಮಾನಂದ ರೂಪವಾದ
ಮಹಾಲಿಂಗದಲ್ಲಿ ವರ್ತಿಸುತ್ತಿರುವನಯ್ಯ
ಬಳಿಕಾ ಯತೀಶ್ವರನು ಸಕಲವಾದ
ಬ್ರಹ್ಮಾದಿ ಪದಗಳನು ಬಿಡುತ್ತ
ಸ್ವಯಂ ಪರಬ್ರಹ್ಮವು ಜಂಗಮವು ಆಗುವುನು.
ಪ್ರಾಣಲಿಂಗಾನಂದ ಉಳ್ಳಾತನಾಗಿ
ಶಿವಲಾಂಛನಧಾರಿಯಾಗಿ
ಬಾಹ್ಯಕರ್ಮ ಮುಕ್ತನಾಗಿರ್ದ
ವೀರಮಾಹೇಶ್ವರನೆ ಸ್ವಯಂ ಜಂಗಮವಯ್ಯ
ಶಾಂತವೀರೇಶ್ವರಾ
Transliteration Śōbhanavāda bud'dhiyuḷḷa svaya
liṅgavāda yatīśvaranu
ellā kaḍegaḷalli sansāra cakradalliruva
samasta prāṇigaḷanu
nōḍutta āścaryabaḍutta
paramānanda rūpavāda
mahāliṅgadalli vartisuttiruvanayya
baḷikā yatīśvaranu sakalavāda
brahmādi padagaḷanu biḍutta
svayaṁ parabrahmavu jaṅgamavu āguvunu.
Prāṇaliṅgānanda uḷḷātanāgi
śivalān̄chanadhāriyāgi
bāhyakarma muktanāgirda
vīramāhēśvarane svayaṁ jaṅgamavayya
śāntavīrēśvarā