ದೇಹೋಪಾಧಿಗೆ ಧನವ ಗಳಿಸಬೇಕೆಂದು
ಲೋಗರ ಗೃಹಕ್ಕೈದಿ
ಮನ ಬಂದ ಪರಿಯಲ್ಲಿ ನುಡಿಸಿಕೊಂಡು
ಮನನೊಂದು ಬೆಂದು ಮರುಗದೆ
ಅನ್ನ ವಸ್ತ್ರ ದಾತರಲ್ಲಿಗೆಯ್ದಿ ದೊರೆತರೆ ಸಂತೋಷಿಯಾಗಿ
ದೊರೆಯದಿರ್ದರೆ ಕೋಪಿಸಿದೆ
ದೊರೆತುದರಲ್ಲಿ ಪರಿಣಾಮಿಸುವಾತನೆ ಸ್ವಯಜಂಗಮವು
ಲಿಂಗಾರ್ಪಿತಕ್ಕೆ ಬಂದುದ ಕೈಕೊಂಡು ಬಾರದುದನಿಚ್ಚೈಸದೆ
ಶಿವ ಕೃಪೆಯಿಂದ ಇದ್ದ ಠಾವಿನಲ್ಲಿಯೆ
ಇರುವಾತನೆ ಸ್ವಯಜಂಗಮವಯ್ಯ ಶಾಂತವೀರೇಶ್ವರಾ
Transliteration Dēhōpādhige dhanava gaḷisabēkendu
lōgara gr̥hakkaidi
mana banda pariyalli nuḍisikoṇḍu
mananondu bendu marugade
anna vastra dātaralligeydi doretare santōṣiyāgi
doreyadirdare kōpiside
doretudaralli pariṇāmisuvātane svayajaṅgamavu
liṅgārpitakke banduda kaikoṇḍu bāradudaniccaisade
śiva kr̥peyinda idda ṭhāvinalliye
iruvātane svayajaṅgamavayya śāntavīrēśvarā