ಈ ಪ್ರಕಾರ ಆಚರಿಸುತ್ತಿರುವ ಆ ಶಿವಯೋಗಿಗೆ
ಪರಿಗ್ರಹಾವಲಂಬನಗಳು ಅಹವು.
ಆವಾವೆಂದಡೆ, ಶ್ರೀ ವೀರಶೈವಾಗಮವಿದ್ಯೆಯೆ ಹೆಂಡತಿಯ,
ಸಂತೋಷವೆ ಪುತ್ರನು,
ಸೈರಣಿಯೆ ಪರಿಚಾರಗಿತ್ತಿಯು,
ಶವಿಭಕ್ತಿಯೆ ತಾಯಿ, ಶಿವಚಾರವೆ ತಂದೆಯು,
ಸತ್ಯವೆ ಮೊಮ್ಮಗನು, ಶಾಂತಿಯೆ ಸಂಗಡಿಗನು,
ವಿರಾಗತ್ವವೆ ಮಿತ್ರನು; ದೇಹ ದಂಡನೆಯೆ ಆಚಾರ್ಯನು,
ಶ್ರದ್ಧಯೆ ತಂಗಿಯು, ಅಹಿಂಸೆಯೆ
ಗೌಡಿಯು, ಕಳವಿಲ್ಲದುದೆ ಭೃತ್ಯನು,
ಮೈ ಗೋಚರಿಸುವಂಥ ತತ್ವ ವಿಚಾರವೆ ಕ್ಷೇತ್ರವು,
ಮೋಕ್ಷವು ತನ್ನ ದೇಶವೆನಿಸುವುದು.
ಈ ಪ್ರಕಾರದಲ್ಲಿ ಪ್ರಾಣಲಿಂಗ ಸಂಬಂಧಿಯಾದಾತಂಗೆ
ಇದು ಲೇಸಾಗಿ ತಿಳಿಯತಕ್ಕದ್ದು
ಶಾಂತವೀರೇಶ್ವರಾ
Transliteration `Ī prakāra ācarisuttiruva ā śivayōgige
parigrahāvalambanagaḷu ahavu.
Āvāvendaḍe, śrī vīraśaivāgamavidyeye heṇḍatiya,
santōṣave putranu,
sairaṇiye paricāragittiyu,
śavibhaktiye tāyi, śivacārave tandeyu,
satyave mom'maganu, śāntiye saṅgaḍiganu,
virāgatvave mitranu; dēha daṇḍaneye ācāryanu,
śrad'dhaye taṅgiyu, ahinseye
gauḍiyu, kaḷavilladude bhr̥tyanu,
mai gōcarisuvantha tatva vicārave kṣētravu,
mōkṣavu tanna dēśavenisuvudu.
Ī prakāradalli prāṇaliṅga sambandhiyādātaṅge
idu lēsāgi tiḷiyatakkaddu
śāntavīrēśvarā