ಕ್ರಿಯಾ ರಹಿತವಾದ ಜ್ಞಾನವು ಪ್ರಯೋಜನವಿಲ್ಲ,
ಜ್ಞಾನವಿಲ್ಲದ ಕ್ರಿಯೆಯು ಪ್ರಯೋಜನವಿಲ್ಲ;
ಒಂದನೊಂದು ಅಲ್ಲಿ ಅವು ದಹನವಾಗುತ್ತಿರಲಾಗಿ
ಕೈಕಾಲು ಇದ್ದು ಕುರುಡ ಕಾಣನು,
ಹೆಳವಂಗೆ ಕಣ್ಣಿದ್ದು ಕೇಕಾಲು ಇಲ್ಲದೆ
ಇಬ್ಬರು ದಹನವಾಗುವರು
ಅದು ಕಾರಣ ಜ್ಞಾನ ಕ್ರಿಯೆಗಳೆರಡನು ಬಿಡಲಾಗದಯ್ಯ
ಶಾಂತವೀರೇಶ್ವರಾ
Transliteration Kriyā rahitavāda jñānavu prayōjanavilla,
jñānavillada kriyeyu prayōjanavilla;
ondanondu alli avu dahanavāguttiralāgi
kaikālu iddu kuruḍa kāṇanu,
heḷavaṅge kaṇṇiddu kēkālu illade
ibbaru dahanavāguvaru
adu kāraṇa jñāna kriyegaḷeraḍanu biḍalāgadayya
śāntavīrēśvarā