ಕೀಳಿನ ಹಯನು ಹಸನಪ್ಪುದು,
ವೀಳಯಕರ ಚೂರ್ಣ ಪರ್ಣ ಪ್ರಮಾಣವಿಡಿದರೆ.
ಹೇಳುವ ಗುರೂಪದೇಶವ ತಾಳಿದವಂಗೆ ಮುಕ್ತಿಯಹುದೆ.
ಕೇಳಿದಂಗೆ ಮುಕ್ತಿಯಿಲ್ಲವು ವಾಳಿತ ವಾಚಾಳಿಕರಿಗೆ,
ಹೇಳಿದಲ್ಲೇನು ಇಲ್ಲವು ಕೇಳುವೆ ದ್ರೋಹವು.
ಬೇಳೆಯು ಗುಲಗಂಜಿಯ
ಪಡೆದರೆ ಬೋನಕ್ಕೆ ಪರ್ವಗಳಾಹುದೆ
ಪರಮಪ್ರಭುವೆ.
Transliteration Kīḷina hayanu hasanappudu,
vīḷayakara cūrṇa parṇa pramāṇaviḍidare.
Hēḷuva gurūpadēśava tāḷidavaṅge muktiyahude.
Kēḷidaṅge muktiyillavu vāḷita vācāḷikarige,
hēḷidallēnu illavu kēḷuve drōhavu.
Bēḷeyu gulagan̄jiya
paḍedare bōnakke parvagaḷāhude
paramaprabhuve.