ಎರಡನರಿವಲ್ಲಿ ಭಂಡಾರಿ ಬಸವಣ್ಣ,
ಮೂರನರಿವಲ್ಲಿ ಚೆನ್ನಬಸವಣ್ಣ,
ಒಂದನರಿವಲ್ಲಿ ಪ್ರಭುದೇವರು.
ಇಂತೀ ಉಭಯದ ಸಂಗಂಗಳ
ಮರೆದಲ್ಲಿ ನಿಜಗುಣ ನಿಜಸಂಗ.
ಇಂತೀ ಬಂಧಮೋಕ್ಷಕರ್ಮಂಗಳು
ಒಂದೂ ಇಲ್ಲದ ಮತ್ತೆ
ಬಾಗಿಲಿಂಗೆ ತಡಹಿಲ್ಲ.
ಎನ್ನ ಮಣಿಹ ಕೆಟ್ಟಿತ್ತು,
ಕೂಡಲಸಂಗಮದೇವರಲ್ಲಿ ಬಸವಣ್ಣ
ಎನಗಾ ಮಣಿಹ ಬೇಡಾಯೆಂದ ಕಾರಣ.
Transliteration Eraḍanarivalli bhaṇḍāri basavaṇṇa,
mūranarivalli cennabasavaṇṇa,
ondanarivalli prabhudēvaru.
Intī ubhayada saṅgaṅgaḷa
maredalli nijaguṇa nijasaṅga.
Intī bandhamōkṣakarmaṅgaḷu
ondū illada matte
bāgiliṅge taḍahilla.
Enna maṇiha keṭṭittu,
kūḍalasaṅgamadēvaralli basavaṇṇa
enagā maṇiha bēḍāyenda kāraṇa.