ಬಹುಜನಂಗಳೆಲ್ಲಾ ಓಲಗವಿಲ್ಲ ಹೋಗಿ,
ಸಲಿಗೆವಂತರಲ್ಲಿಲ್ಲ ನಿಲ್ಲಿ.
ಏಕಾಂತ ಸಂಬಂಧರು ಹೋಗಿ,
ಲೋಕಾಂತ ಭಂಡರು ನಿಲ್ಲಿ.
ಇಂತೀ ಅವರವರ ಸ್ವಸ್ಥಾನಂಗಳ
ಸಲುಗೆಯನರಿದುಬಿಡುತ್ತಿದ್ದೇನೆ,
ಕೂಡಲಸಂಗಮದೇವರಲ್ಲಿ ಬಸವಣ್ಣನ ಕಾಲವೇಳೆಯನರಿದು.
Transliteration Bahujanaṅgaḷellā ōlagavilla hōgi,
saligevantarallilla nilli.
Ēkānta sambandharu hōgi,
lōkānta bhaṇḍaru nilli.
Intī avaravara svasthānaṅgaḷa
salugeyanaridubiḍuttiddēne,
kūḍalasaṅgamadēvaralli basavaṇṇana kālavēḷeyanaridu.