ಉಂಡೆಹೆನೆಂಬಲ್ಲಿ ಅನ್ನವನಿಕ್ಕದೆ ಸತ್ತ ಮತ್ತೆ,
ಅಕ್ಕಿಯ ಹೇರ ಮಸ್ತಕದಲ್ಲಿರಿಸಿ,
ಘಟ್ಟಿ ತುಪ್ಪ ತೋಯ ಉಣ್ಣೆಂದು ಬಿಕ್ಕಿ ಬಿಕ್ಕಿ ಅಳುವನಂತೆ,
ಇವರಚ್ಚುಗದ ಭಕ್ತಿಯ ಕಂಡು ಮೆಚ್ಚನಯ್ಯಾ,
ಎನ್ನ ಉರಿಲಿಂಗತಂದೆ.
Transliteration Uṇḍ'̔ehenemballi annavanikkade satta matte,
akkiya hēra mastakadallirisi,
ghaṭṭi tuppa tōya uṇṇendu bikki bikki aḷuvanante,
ivaraccugada bhaktiya kaṇḍu meccanayyā,
enna uriliṅgatande