•  
  •  
  •  
  •  
Index   ವಚನ - 17    Search  
 
ಅಮೃತಕ್ಕೆ ಹಸಿವುಂಟೆ? ಜಲಕ್ಕೆ ತೃಷೆಯುಂಟೆ? ಮಹಾಜ್ಞಾನಸ್ವರೂಪಂಗೆ ವಿಷಯವುಂಟೆ? ಸದ್ಗುರುಕಾರುಣ್ಯವ ಪಡೆದು ಲಿಂಗಾರ್ಚನೆಯಂ ಮಾಡುವ ಮಹಾಭಕ್ತಂಗೆ ಬೇರೆ ಮುಕ್ತಿಯ ಬಯಕೆ ಉಂಟೆ? ಅವರುಗಳಿಗೆ ಅದು ಸ್ವಯಂಭು ಸಹಜಸ್ವಭಾವ. ಇನ್ನು ತೃಪ್ತಿ ಅಪ್ಯಾಯನ ಅರಸಲುಂಟೆ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Amr̥takke hasivuṇṭe? Jalakke tr̥ṣeyuṇṭe? Mahājñānasvarūpaṅge viṣayavuṇṭe? Sadgurukāruṇyava paḍedu liṅgārcaneyaṁ māḍuva mahābhaktaṅge bēre muktiya bayake uṇṭe? Avarugaḷige adu svayambhu sahajasvabhāva. Innu tr̥pti apyāyana arasaluṇṭe? Uriliṅgapeddipriya viśvēśvarā.