ಜ್ಞಾನ ಸದ್ಭಕ್ತಿ ಸನ್ನಹಿತವಾಗಿ,
ಲಿಂಗ ಮುಂತಾಗಿ ಮಾಡಿದ ಕ್ರೀ ಲಿಂಗಕ್ರೀ.
ಧ್ಯಾನ ಪೂಜೆ ಭಕ್ತಿಯರ್ಪಿತ
ಪ್ರಸಾದ ಮುಕ್ತಿ- ಇವೆಲ್ಲವು ತನ್ನೊಳಗೆ,
ಅಜ್ಞಾನ ಅಭಕ್ತಿ ಮರವೆ ಮುಂತಾದ
ಕ್ರೀ ಅಂಗಕ್ರೀ, ಅದು ಹೊರಗು.
ಇದು ಕಾರಣ, ಜ್ಞಾನ ಸದ್ಭಕ್ತಿ ಸನ್ನಹಿತವಾದುದೆ ಮುಕ್ತಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Jñāna sadbhakti sannahitavāgi,
liṅga muntāgi māḍida krī liṅgakrī.
Dhyāna pūje bhaktiyarpita
prasāda mukti- ivellavu tannoḷage,
ajñāna abhakti marave muntāda
krī aṅgakrī, adu horagu.
Idu kāraṇa, jñāna sadbhakti sannahitavādude mukti
uriliṅgapeddipriya viśvēśvarā.