•  
  •  
  •  
  •  
Index   ವಚನ - 178    Search  
 
ಪುರಾಕೃತಪುಣ್ಯಫಲದ ಪರಿಯ ನೋಡಿರೆ! ಶ್ರೀಗುರು, ಲಿಂಗಿ ಜಂಗಮ ಪ್ರಸಾದವಾಗಿ ಪ್ರತ್ಯಕ್ಷವಾದ! ಶಿವ ಶಿವಾ, ಗುರುವೆಂಬ ಕಲ್ಪವೃಕ್ಷ, ಲಿಂಗವೆಂಬ ಕಾಮಧೇನು, ಜಂಗಮವೆಂಬ ಚಿಂತಾಮಣಿ, ಪ್ರಸಾದವೆಂಬ ಮಹಾಮೃತವು. ಈ ಚತುರ್ವಿಧಪ್ರಸಾದಾಮೃತವ ಭೋಗಿಸದೆ ಅಜ್ಞಾನಸಂಸಾರವೆಂಬ ಅಂಬಿಲವ ಬಯಸುವರನೇನೆಂಬೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Purākr̥tapuṇyaphalada pariya nōḍire! Śrīguru, liṅgi jaṅgama prasādavāgi pratyakṣavāda! Śiva śivā, guruvemba kalpavr̥kṣa, liṅgavemba kāmadhēnu, jaṅgamavemba cintāmaṇi, prasādavemba mahāmr̥tavu. Ī caturvidhaprasādāmr̥tava bhōgisade ajñānasansāravemba ambilava bayasuvaranēnembe uriliṅgapeddipriya viśvēśvarā.