•  
  •  
  •  
  •  
Index   ವಚನ - 208    Search  
 
ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂಬಾತನು ಸದ್ಗುರುವನರಸಿಕೊಂಡು ಬಂದು, ಅವನ ಕಾರುಣ್ಯದಿಂದ ಮುಕ್ತಿಯಂ ಪಡೆದೆವೆಂದು ಆ ಶ್ರೀಸದ್ಗುರುವಿಗೆ ದಂಡಪ್ರಣಾಮವಂ ಮಾಡಿ ಭಯಭಕ್ತಿಯಿಂದ ಕರಂಗಳಂ ಮುಗಿದು ನಿಂದಿರ್ದು, ಎಲೆ ದೇವಾ, ಎನ್ನ ಭವಿತನವನಂ ಹಿಂಗಿಸಿ ನಿಮ್ಮ ಕಾರುಣ್ಯದಿಂದ ಎನ್ನ ಭಕ್ತನಂ ಮಾಡುವುದೆಂದು ಶ್ರೀಗುರುವಿಂಗೆ ಬಿನ್ನಹಂ ಮಾಡಲು, ಆ ಶ್ರೀಗುರುವು ಅಂತಪ್ಪ ಭಯಭಕ್ತಿ ಕಿಂಕರತೆಯೊಳಿಪ್ಪ ಶಿಷ್ಯನಂ ಕಂಡು, ತಮ್ಮ ಕೃಪಾವಲೋಕನದಿಂ ನೋಡಿ, ಆ ಭವಿಯ ಪೂರ್ವಾಶ್ರಯಮಂ ಕಳೆದು, ಪುನರ್ಜಾತನಂ ಮಾಡಿ ಆತನ ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡುವ ಕ್ರಮವೆಂತೆಂದಡೆ: `ಜ್ವಲತ್ಕಾಲಾನಲಾಭಾಸಾ ತಟಿತ್‍ಕೋಟಿಸಮಪ್ರಭಾ ತಸ್ಯೋರ್ಧ್ಯೇ ತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಲಾ ಯಾ ಕಲಾ ಪರಮಾ ಸೂಕ್ಷ್ಮಾ ತತ್ತ್ವಾನಾಂ ಬೋಧಿನೀ ಪರಾ ತಾಮಾಕರ್ಷ್ಯ ಯಥಾನ್ಯಾಯಂ ಲಿಂಗೇ ಸಮುಪವೇಶಯೇತ್ ಪ್ರಾಣಪ್ರತಿಷ್ಠಾಮಂತ್ರಂ ಚ ಮೂಲಮತ್ರಂ ಪೆಠೀದಪಿ ಅಥಾಸ್ಮಿನ್ ಸಂಸ್ಕೃತೇ ಲಿಂಗೇ ಸುಸ್ಥಿರೋ ಭವ ಸರ್ವದಾ' ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Bhavitanakke hēsi bhaktanāgabēkembātanu sadguruvanarasikoṇḍu bandu, avana kāruṇyadinda muktiyaṁ paḍedevendu ā śrīsadguruvige daṇḍapraṇāmavaṁ māḍi bhayabhaktiyinda karaṅgaḷaṁ mugidu nindirdu, ele dēvā, enna bhavitanavanaṁ hiṅgisi nim'ma kāruṇyadinda enna bhaktanaṁ māḍuvudendu śrīguruviṅge binnahaṁ māḍalu, ā śrīguruvu antappa bhayabhakti kiṅkarateyoḷippa śiṣyanaṁ kaṇḍu, tam'ma kr̥pāvalōkanadiṁ nōḍi, Ā bhaviya pūrvāśrayamaṁ kaḷedu, punarjātanaṁ māḍi ātana aṅgada mēle liṅgapratiṣṭheya māḍuva kramaventendaḍe: `Jvalatkālānalābhāsā taṭitkōṭisamaprabhā tasyōrdhyē tu śikhā sūkṣmā cidrūpā paramā kalā yā kalā paramā sūkṣmā tattvānāṁ bōdhinī parā tāmākarṣya yathān'yāyaṁ liṅgē samupavēśayēt prāṇapratiṣṭhāmantraṁ ca mūlamatraṁ peṭhīdapi athāsmin sanskr̥tē liṅgē susthirō bhava sarvadā' uriliṅgapeddipriya viśvēśvarā.