ಲಿಂಗಭರಿತ ಶರಣ, ಶರಣಭರಿತ ಲಿಂಗವದೆಂತೆಂದಡೆ:
`ಶರಣಮಧ್ಯೇ ತು ಲಿಂಗಂ ಸ್ಯಾತ್ ಲಿಂಗಮಧ್ಯೇ ತು ಶರಣಃ'
ಎಂದುದಾಗಿ,
ಶರಣ ಬೇರೆಯೆ? ಲಿಂಗ ಬೇರೆಯೆ?
ಶಿವ ಶಿವಾ ಒಂದೇ ಕಾಣಿರಣ್ಣಾ.
ಶರಣನ ಕ್ರೀ ಎಲ್ಲವೂ ಲಿಂಗಕ್ರೀ,[ಲಿಂಗಕ್ರಿ] ಎಲ್ಲವೂ ಶರಣಕ್ರೀ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Liṅgabharita śaraṇa, śaraṇabharita liṅgavadentendaḍe:
`Śaraṇamadhyē tu liṅgaṁ syāt liṅgamadhyē tu śaraṇaḥ'
endudāgi,
śaraṇa bēreye? Liṅga bēreye?
Śiva śivā ondē kāṇiraṇṇā.
Śaraṇana krī ellavū liṅgakrī,[liṅgakri] ellavū śaraṇakrī
uriliṅgapeddipriya viśvēśvarā.