ಶರಣರ ಕೂಡೆ ನುಡಿ ದಿಟವಿಲ್ಲ, ಮೇಲೆ ಇನ್ನೇನಾದೀತು?
ತನು ಸವೆಯದು, ಮನ ಸವೆಯದು, ಧನ ಸವೆಯದು,
ಸತ್ಯದ ನುಡಿ ಸಾಧ್ಯವಾಗದು.
ಕೇಳಿ ಕೇಳಿ, ಮೇಲೆ ಇನ್ನೇನಾದೀತು?
ಪುರಾತರ ಚರಿತ್ರವನರಿದು,
ಅಸತ್ಯಕ್ಕೆ ಲಿಂಗ ಒಲಿಯನೆಂಬುದನರಿದು
ಅಸತ್ಯವನು [ನೀಗಿಸಿ] ವಾಙ್ಮನಪ್ರಾಣಾಧಿನಾಥ ಶರಣರಲ್ಲಿ
ಸತ್ಯಸಂಭಾಷಣೆಯ ಕರುಣಿಸುವುದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Śaraṇara kūḍe nuḍi diṭavilla, mēle innēnādītu?
Tanu saveyadu, mana saveyadu, dhana saveyadu,
satyada nuḍi sādhyavāgadu.
Kēḷi kēḷi, mēle innēnādītu?
Purātara caritravanaridu,
asatyakke liṅga oliyanembudanaridu
asatyavanu [nīgisi] vāṅmanaprāṇādhinātha śaraṇaralli
satyasambhāṣaṇeya karuṇisuvudu
uriliṅgapeddipriya viśvēśvarā.